ಯೋಧನ ಅಂತಿಮ ನಮನ ವೇಳೆ SP, DC ಕಣ್ಣೀರು|Army| Tv9kannada

ಯೋಧನ ಅಂತಿಮ ನಮನ ವೇಳೆ SP, DC ಕಣ್ಣೀರು|Army| Tv9kannada

ಚಿಂಚನಸೂರು ಗ್ರಾಮದ ವೀರಯೋಧ ರಾಜಕುಮಾರ್ ಮಾಮನಿ ಹುತಾತ್ಮನಾಗಿದ್ದಾನೆ. ಆಗಸ್ಟ್ ಮೂರರಂದು ಮುಂಜಾನೆ ಆರು ಮೂವತ್ತರ ಸಮಯದಲ್ಲಿ, ತ್ರಿಪುರಾ ರಾಜ್ಯದ ಭಾರತ-ಭಾಂಗ್ಲಾ ಗಡಿಯಲ್ಲಿರುವ ಧಲಾಯಿ ಎಂಬ ಪ್ರದೇಶದಲ್ಲಿ ಗಸ್ತು ತಿರಗುತ್ತಿದ್ದಾಗ, ಬಾಂಗ್ಲಾ ಮೂಲದು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವತ್ತೆಂಟು ವರ್ಷದ ರಾಜಕುಮಾರ್ ಮಾಮನಿ ವೀರ ಮರಣಹೊಂದಿದ್ದಾನೆ. ಇನ್ನು ರಾಜಕುಮಾರ್ ಮತ್ತು ಭರುಸಿಂಗ್, ಉಸಿರು ಚೆಲ್ಲೋವರಗೆ ಉಗ್ರರ ಜೊತೆ ಹೋರಾಡಿ, ವೀರ ಮರಣ ಹೊಂದಿದ್ದಾರೆ. ಆಗಸ್ಟ್ ಮೂರರಂದು ಮುಂಜಾನೆ ಉಗ್ರರ ಗುಂಡಿಗೆ ಬಲಿಯಾಗಿದ್ದ ರಾಜಕುಮಾರ್ ಮಾಮನಿ ಪಾರ್ಥಿವ ಶರೀರ, ಇಂದು ನಸುಕಿನ ಜಾವ ಮೂರು ಗಂಟೆಗೆ ಯೋಧನ ಸ್ವಗ್ರಾಮವಾದ ಚಿಂಚನಸೂರು ಗ್ರಾಮವನ್ನು ತಲುಪಿತು. ಮುಂಜಾನೆ ಹನ್ನೊಂದು ಗಂಟೆವರಗೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಯೋಧನ ಪ್ರಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಸೇರಿದಂತೆ ಜಿಲ್ಲೆಯ ಎಸ್ಪಿ, ಡಿಸಿ ಆಗಮಿಸಿ ಪ್ರಾರ್ಥಿವ ಶರೀರದ ದರ್ಶನ ಪಡೆದ್ರು. ಹುತಾತ್ಮ ಯೋಧನ ಪ್ರಾರ್ಥಿವ ಶರೀರದ ದರ್ಶನ ಪಡೆದ ಎಸ್ಪಿ ಡಾ. ಸಿಮಿ ಮರಿಯಮ್ ಮತ್ತು ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ, ಭಾವೋದ್ವೇಗಕ್ಕೊಳಗಾದರು. ಹುತಾತ್ಮ ಯೋಧನ ಪತ್ನಿ ಮತ್ತು ಮಕ್ಕಳನ್ನು ನೋಡಿ ಇಬ್ಬರು ಅಧಿಕಾರಿಗಳು ಕೂಡಾ ಕಣ್ಣೀರು ಹಾಕಿದರು.

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#TV9Kannada #Kalaburgi #soldier #Army

TV9 Kannada | Kannada News | Latest Kannada News |

Credits: #Politics #ChetanMavoor /producer| #Manjunath /VideoEditor|#TV9D

TV9 KannadaKalaburgisoldier

Post a Comment

0 Comments